fbpx

ಮಾಯೆ

ಮಾಯೆ

ಕಾಡುಗತ್ತಲಿಗಾದರೇನೋ
ಸೂರ್ಯನೊಬ್ಬನೇ ವಿಮೋಚಕ
ಕಾಣಿಸಿದರೂ ಕಾಣದಂತಿಹ
ಮಾಯೆಯ ಕಗ್ಗತ್ತಲಿಗ್ಯಾರು ಮಾರ್ಗದರ್ಶಕ?
ಉತ್ತರ ಕಣ್ಮುಂದಿದ್ದರೂ
ಮನಸ್ಕೈಗೆ ಸಿಗದಿರುವಂತಃ ಮಾಯೆ
ಮಿಥ್ಯಗಳ ಮಿಶ್ರಣದಲಿ
ಬೆರೆತ ವಿಷಯಗಳಿಗಿರುವುದೇ
ಮಿಥ್ಯಾಮಿಥ್ಯಗಳ ಭೇದಿಸುವ ಖಡ್ಗ
ಎಲ್ಲಿಯವರೆಗೀ ವಿರೋಧಾವಿರೋಧಗಳ ದ್ವೈತ
ಇದು ಪಕೃತಿನಿಯಮವೋ
ವಿಶ್ವತ್ವಿಧಿವಿಧಾನವೋ?
ಇದು
ಪ್ರತಿಜೀವಾಜೀವಾನುಸರಿತಾವಿಧಿಯೇ
ಮಿತಗ್ರಹಣಾರ್ಹಸತ್ಯ


[Rough english translation:]

The dark forest soaked in blackness
Has the sole liberator that is the sun
The visible is, invisible
From the darkness soaked maya,
Who will lead the path?
Though the answer lies on the eye front
The mind doesnt aquire, of maya
In the mixture of the untrue
Lie many things
Is there a sword that splits through the true and the untrue
Until when is the dualism of the opposites
Is it law of the nature?
Or the way of the universe?
This is
The way that applies to all living and non-living things, is
The limited understandable truth

2019
Scroll Up
error: Content is protected !!